Vishvesha Krishna Goshala - Hebri

Offerings

You can select products and we deliver it.

Cow Adoption

Adopt cow and we will take care on your behalf.

₹ 2500

Fodder

Fund will be utilised for Dry and Green fodder.

₹ 460

Campaign Details

ಬಂಧುಗಳೇ,


ಮನವಿ -
ಪರಮ ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆದೇಶದಂತೆ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶ್ರೀ ವಿಶ್ವೇಶಕೃಷ್ಣ ಗೋಸೇವಾ ಟ್ರಸ್ಟ್ (ರಿ.) ನ ಮೂಲಕ ಗುರು ಶ್ರೀ ಶ್ರೀ ವಿಶ್ವೇಶತೀರ್ಥರ ಸಂಸ್ಕರಣೆಗಾಗಿ ನಾಲ್ಕನೆಯ ಗೋಶಾಲೆಯನ್ನು ಹೆಬ್ರಿಯ ಗಿಲ್ಲಾಳಿಯಲ್ಲಿ ನಿರ್ಮಿಸಿರುವುದು ತಮಗೆಲ್ಲ ತಿಳಿದಿರುವ ವಿಷಯ.
7-5- 2022 ರಂದು 100 ಗೊವುಗಳನ್ನು ಸಂರಕ್ಷಿಸಲು  ಗೋಶಾಲೆಯನ್ನು ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಲೋಕಾರ್ಪಣೆ ಮಾಡಿದರು.

ಪ್ರಕೃತ ಈ ಗೋಶಾಲೆಯಲ್ಲಿ ನೂರಕ್ಕೂ ಅಧಿಕ ಅನಾಥ, ಅಶಕ್ತ ಗೋವುಗಳ ಸಂರಕ್ಷಣೆ ನೆರವೇರುತ್ತಿದೆ. 
ನಿರಂತರ ಅನಾಯಾಸವಾಗಿ ಗೋವುಗಳ ಪಾಲನೆ ನಡೆಯುವ ಉದ್ದೇಶದಿಂದ ಪೂಜ್ಯ ಶ್ರೀಪಾದರ ಸೂಚನೆಯಂತೆ ಭಕ್ತರಿಗೆ ಗೋಸೇವಾನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ.

ಗೋಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದರಿಂದ ಗೋಶಾಲಾಭಿವೃದ್ಧಿ - ನಿಧಿ ಸಮರ್ಪಣೆಯನ್ನು ಯಥಾಶಕ್ತಿಯಾಗಿ ನೀಡಬಹುದು. ಗೋಸಂರಕ್ಷಣೆಗಾಗಿ ನಿರಂತರ ನಮ್ಮೊಂದಿಗೆ ಕೈಜೋಡಿಸಿ, ಗೋಪಾಲಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಿರಿ. ಗೋವುಗಳ ಅಂತರ್ಯಾಮಿ ಶ್ರೀಕೃಷ್ಣನ ಸೇವೆ ಮಾಡಿರಿ.

ಗೋಶಾಲೆಯಲ್ಲಿ ಜನ್ಮದಿನ, ಹಬ್ಬ ಹರಿದಿನಗಳಲ್ಲಿ ತಮ್ಮ ಇಷ್ಟದಿನದಂದು ಗೋಪೂಜೆ, ಗೋದಾನ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಅವಕಾಶವಿರುತ್ತದೆ.

Beneficiary Details

 ವಿಶ್ವೇಶಕೃಷ್ಣ ಗೋಸೇವಾ ಟ್ರಸ್ಟ್ (ರಿ.)
 ಗಿಲ್ಲಾಳಿ, ಹೆಬ್ರಿ.

Manager POC:-84311 35078 or +91 94819 71506

Goal

Donate

Custom Amount

OR